ಸಮ್ಮಿಲನ ಶೆಟ್ಟಿ ಚಿಟ್ಟೆ ಪಾರ್ಕ್ ನ್ನು ೨೦೧೧ರಲ್ಲಿ ಸಮ್ಮಿಲನ ಶೆಟ್ಟಿಯವರು, ಚಿಟ್ಟೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಸ್ಥಾಪಿಸಿದರು.ಇದೊಂದು ಖಾಸಗಿ ಪಾರ್ಕ್ ಆಗಿದ್ದು, ಕೇವಲ ಚಿಟ್ಟೆಗಳನ್ನು ಸಂರಕ್ಷಿಸುವ ಕಾರ್ಯ ನಡೆಯುತ್ತದೆ. ಈ ಪಾರ್ಕ್ ೭.೩೫ ಎಕರೆ ಅಭಯಾರಣ್ಯದಲ್ಲಿ ಸ್ಥಾಪಿತವಾಗಿದೆ.. ಈ ಪಾರ್ಕ್ ಮಂಗಳೂರಿನ ಬೆಳುವಾಯಿಯಲ್ಲಿ ಸ್ಥಾಪಿತವಾಗಿದ್ದು. ಬೆಳುವಾಯಿಯು ಕಾರ್ಕಳ ಮತ್ತು ಮೂಡುಬಿದಿರೆ ಮಾರ್ಗದಲ್ಲಿ ಇದೆ. ಈ ಪಾರ್ಕ್ ಅಧಿಕೃತವಾಗಿ ೨೦೧೩ರ ಆಗಸ್ಟ್ ನಲ್ಲಿ ಉದ್ಘಾಟನೆಯಾಯಿತು. ಮಂಗಳೂರಿನಿಂದ ೪೨ ಕಿಲೊ ಮೀಟರ್ ದೂರದಲ್ಲಿರುವ ಈ ಪಾರ್ಕ್ ಪಶ್ಚಿಮ ಘಟ್ಟ ಸಾಲುಗಳ ತಪ್ಪಲಿನಲ್ಲಿದೆ.ಇಲ್ಲಿ 118 ಪ್ರಬೇಧಗಳ ಚಿಟ್ಟೆಗಳು ದಾಖಲಾಗಿದೆ. ಇವುಗಳಲ್ಲಿ ಪಶ್ಚಿಮ ಘಟ್ಟಗಳಿಗೆ ಮಾತ್ರ ಸೀಮಿತವಾದ ಮಲಬಾರ್ ಬ್ಯಾಂಡೆಡ್ ಪೀಕಾಕ್( ) ಮಲಬಾರ್ ರೊಸ್ ( ) ಮುಂತಾದವು ಸೇರಿವೆ. == ಲಾಂಛನ == ಈ ಚಿಟ್ಟೆ ಪಾರ್ಕ, ಲಾಂಛನವಾಗಿ ಸ್ಥಳೀಯ ಮತ್ತು ಪಶ್ಚಿಮ ಘಟ್ಟಗಳ ಬೆರಗುಗೊಳಿಸುವ 'ಮಲಬಾರ್ ಬ್ಯಾಂಡೆಡ್ ಪೀಕಾಕ್' ಚಿಟ್ಟೆಯನ್ನು ಹೊಂದಿದೆ. == ಪಾರ್ಕ್ ನಲ್ಲಿ ಕಂಡುಬರುವ ಕೆಲವು ಪ್ರಬೇಧಗಳ ಚಿಟ್ಟೆಗಳ ಪಟ್ಟಿ == ಇಂಡಿಯನ್ ಸ್ಕಿಪ್ಪರ್ ( ) ಸ್ಮಾಲ್ ಪ್ಲಾಟ್( ) ಪೈಡ್ ಪ್ಲಾಟ್( ) ರೆಡ್ ಹೆಲೆನ್( ) ಪ್ಯಾರಿಸ್ ಪಿಕಾಕ್( ) ಮಲಬಾರ್ ರೊಸ್( ) ಮಲಬಾರ್ ಬ್ಯಾಂಡೆಡ್ ಪೀಕಾಕ್ ( ) ಯಾಮ್ ಪ್ಲೈ () ಇಂಡಿಯನ್ ಸನ್ ಬೀಮ್ ( ) ಕಾಮನ್ ನವಾಬ್ ( ) ನೀಲಿ ನವಾಬ್ ( ) ಕ್ಲಿಪ್ಪರ್ () ಕಾಮನ್ ಬ್ಯಾರನ್ ( ) == ಸಂದರ್ಶನ ಸಮಯ ಮತ್ತು ದಿವಸಗಳು == ಪ್ರತಿ ಭಾನುವಾರ ೦೮.೩೦ ರಿಂದ ೧೨.೩೦ ಭೇಟಿಗೆ ಸೂಕ್ತ ತಿಂಗಳು: ಜೂನ್ ನಿಂದ ಡಿಸೆಂಬರ್. == ಪಾರ್ಕ್ ನ ಮುಖ್ಯ ಉದ್ದೇಶ == ಚಿಟ್ಟೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಂದರ್ಶಕರಿಗೆ, ವಿಶೇಷವಾಗಿ ಮಕ್ಕಳಿಗೆ ಚಿಟ್ಟೆಗಳ ಬಗ್ಗೆ ಮಾಹಿತಿ ನೀಡಲು ಮತ್ತು ಪ್ರಕೃತಿಯಲ್ಲಿ ಅವುಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಸುವ ಸಲುವಾಗಿ. ಪಶ್ಚಿಮ ಘಟ್ಟದ ​​ಜೀವಗೋಳದ ಚಿಟ್ಟೆಗಳಿಗೆ ಸಂರಕ್ಷಿತ ವಾಸಸ್ಥಾನವನ್ನು ಒದಗಿಸಲು. ಚಿಟ್ಟೆಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳಲು. ಚಿಟ್ಟೆಗಳ ಸೌಂದರ್ಯವನ್ನು ನೋಡುವ ಮತ್ತು ಆನಂದಿಸುವ ಮೂಲಕ ಜನರಿಗೆ ಉನ್ನತಿಗೇರಿಸುವ ಅನುಭವವನ್ನು ಒದಗಿಸುವ ಸಲುವಾಗಿ. == ಗ್ಯಾಲರಿ == == ಉಲ್ಲೇಖಗಳು == == ಬಾಹ್ಯ ಕೊಂಡಿ == ಸಮ್ಮಿಲನ ಶೆಟ್ಟಿ ಚಿಟ್ಟೆ ಪಾರ್ಕ್ ಚಿಟ್ಟೆಗಳ ಪಟ್ಟಿ